Wednesday, January 4, 2017



ಐಸಲೇ ಕುಮಾರವ್ಯಾಸ!                           -೬೪-
ಕರ್ಣ ೨೫-೪೫

ಅರಸ ಕೇಳೈ, ಕರ್ಣ ಶಕ್ತಿಸ್ಫುರಣ ಸಹಿತೀ ಬಾಣ
ಅತಿ ದುರ್ಭರವದಲ್ಲದೆ ಬರಿಯ ವಿಷದುಬ್ಬರದ ಸಾಹಸವ
ನರನಲೇ ಕೈಕೊಳ್ಳದೀ ಬಹ ಸರಳ
ಐದಂಬುಗಳಲಿ ಎಡೆಯಲಿ ತರಿದು ಬಿಸುಟನು
ವೀರ ನಾರಾಯಣನ ನೇಮದಲಿ..’

(ದುರ್ಭರ- ಕಠಿಣ;  ಸರಳು, ಅಂಬು-ಬಾಣ)

ಧೃತರಾಷ್ಟ್ರ ಕೇಳು, ಕರ್ಣನ ಶಕ್ತಿಯ ಸಂಯೋಗದಿಂದ ಆ ಬಾಣಕ್ಕೆ ಭಯಂಕರತೆಯಿತ್ತೇ ವಿನಃ ಬರಿಯ ವಿಷ ಉಗುಳುತ್ತಾ
ಬರುವ ಹಾವಿನ ಸಾಹಸ ಅರ್ಜುನನಿಗೆ ಯಾವ ಲೆಕ್ಕ? ಶ್ರೀಕೃಷ್ಣನ ಆಣತಿಯಂತೆ ತಾನಾಗಿ  ನುಗ್ಗುತ್ತಿದ್ದ ಆ ಬಾಣವನ್ನು ಐದು ಬಾಣಗಳ ಮೂಲಕ ತುಂಡುಮಾಡಿ ಹಾಕಿದ

ಪದ್ಯ ಕರ್ಣನಶಕ್ತಿ ಸ್ಫುರಣದ ಬಗ್ಗೆ ಮಾತನಾಡುತ್ತಿದೆ ಅಲ್ಲದೆ ನಮ್ಮನ್ನೂ ಚಿಂತಿಸಲು ಹಚ್ಚುತ್ತದೆ. ಎಷ್ಟೇ ಮಹತ್ವದ ಅಸ್ತ್ರವಾಗಿದ್ದರೂ ಅವಕ್ಕೆ ತಮ್ಮದೇ ಆದ ಅಸ್ಥಿತ್ವವಿಲ್ಲ. ವೀರರ ಶಕ್ತಿ ಸ್ಫುರಣದಿಂದಲೇ ಅವು ಶ್ರೇಷ್ಠತೆಯನ್ನು ಪಡೆಯುತ್ತವೆ.ಒಂದು ಕ್ಷಣದ ಹಿಂದೆ ಇಡೀ ರಣರಂಗವನ್ನೇ ಅವಾಕ್ಕಾಗಿಸಿದ ಸರ್ಪ ಬಾಣ ಕರ್ಣನ ಸಾಮರ್ಥ್ಯದಿಂದಾಗಿ ಮಹತ್ವ ಪಡೆಯಿತೇ?ಇದು ಕರ್ಣನ ಶ್ರೇಷ್ಠತೆಯನ್ನು ಹೇಳುತ್ತಿದೆಯಾ? ಕುಮಾರವ್ಯಾಸ ಹೌದು ಅನ್ನುತ್ತಿರುವಂತಿದೆ.
ಅದಕ್ಕಾಗಿಯೇ ಅದು ಕರ್ಣನನ್ನು ಪುನಃ ತೊಡುವಂತೆ ಬೇಡಿದ್ದು!

ಕರ್ಣನ ಶಕ್ತಿಯ ಸಂಯೋಗವಿಲ್ಲದೇ ಬಂದ ಬಾಣ ಅರ್ಜುನನಿಗೆ ತೃಣ ಸಮಾನವಾಯಿತು, ತುಂಡು ಮಾಡಿ ಹಾಕಿದ;ಬರೀ ವಿಷದ ಉಬ್ಬರ ನಡೆಯಲಿಲ್ಲ’ಅತಿಯಾದ ,ತಪ್ಪಾದ ಆತ್ಮವಿಶ್ವಾಸ ನಗೆಪಾಟಲಾಯಿತು!

ಮಹಾಭಾರತದ ಉದ್ದಕ್ಕೂ ವಿಷವೆನ್ನುವುದು ಒಂದು ಪ್ರತಿಮೆಯಂತೆ ಆಗಿಂದಾಗ್ಗೆ ಬರುತ್ತಲೇ ಇರುತ್ತದೆಂದು  ವಿಧ್ವಾಂಸರು ಗುರ್ತಿಸಿದ್ದಾರೆ. ಒಂದು ವಿಷದ ಮಹತ್ವವಾದ ಅಧ್ಯಾಯ ಈ ಸಂದೇಶದೊಂದಿಗೆ ಮುಗಿಯುತ್ತದೆ.

ಯಾವುದೇ ಮಹತ್ತಿನ ಹಿಂದೆ ಇರುವ ಶಕ್ತಿಸ್ಫುರಣವನ್ನು ನಾವು ನೆನಪಿಡುವಂತೆ ಮಾಡುತ್ತದೆ ಈ ಪದ್ಯ.
ಕುಮಾರವ್ಯಾಸ ಪ್ರತಿಷ್ಠಾನ                                                             /೦೧/೨೦೧೭ಥವನ್ನು ತಗ್ಗಿಸಿ ಪರಿಹಾರ ಮಾಅಣದ್ದಕ್ಕಾಗಿಯೆ ತಾನೆ ಅರ್ಜುನ ಅಕ್ಷೋಹಿಣಿ ಸೈನ್ಯವನ್ನು ಬದಿಗಿಟ್ಟು ಕೃಷ್ಣನನ್ನು ಆಯ್ಕೆ ಮಾಕೊಂದದ್ದು

No comments:

Post a Comment